`ನಾನೇ ಸ್ಟಾರ್` ಚಿತ್ರದ ಹಾಡುಗಳ ಧ್ವನಿಮುದ್ರಣ
Posted date: 01 Tue, Apr 2014 – 09:35:43 AM

ನಾಗರತ್ನ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ನಾನೇ ಸ್ಟಾರ್’  ಚಿತ್ರದ ಹಾಡುಗಳ ಧ್ವನಿಮುದ್ರಣ ಹಂಸಲೇಖ ಸ್ಟುಡಿಯೋದಲ್ಲಿ ನಡೆದಿದೆ. ಹಂಸಲೇಖ ಅವರು ಗೀತರಚನೆ ಮಾಡಿ ಸಂಗೀತ ನೀಡುತ್ತಿರುವ ಈ ಚಿತ್ರದಲ್ಲಿ ಆರು ಹಾಡುಗಳಿವೆ. ಖ್ಯಾತ ಗಾಯಕರಾದ ಜೇಸುದಾಸ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಸೋನುನಿಗಂ, ಶ್ರೇಯಾಘೋಶಾಲ್ ಮುಂತಾದವರು ಈ ಚಿತ್ರದ ಗೀತೆಗಳನ್ನು ಹಾಡಿದ್ದಾರೆ. ಏಪ್ರಿಲ್‌ನಲ್ಲೇ ಚಿತ್ರೀಕರಣ ಆರಂಭವಾಗಲಿದ್ದು ತಾರಾಬಳಗದ ಆಯ್ಕೆ ನಡೆಯುತ್ತಿದೆ.
   ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ  ಬರೆದು ನಿರ್ದೇಶನವನ್ನು ಮಾಡುತ್ತಿರುವ ಸ್ಟಾರ್ ಶ್ರೀನಿವಾಸ್ ಈ ಚಿತ್ರದ ನಿರ್ಮಾಪಕರು ಹೌದು. ಅನಿಲ್‌ಕುಮಾರ್ ಶರ್ಮ ಸಹ ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ಮಾಧವನ್ ಅವರ ಛಾಯಾಗ್ರಹಣವಿದೆ. ಕನ್ನಡ, ತೆಲುಗು, ತಮಿಳು ಮೂರು ಭಾಷೆಯಲ್ಲೂ ಈ ಚಿತ್ರ ನಿರ್ಮಾಣವಾಗುತ್ತಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed